🇧🇭 *ಬಹರೈನ್* ❤ *ಬ್ರದರ್ಸ್*🇮🇳
ಲೋಕ ಪ್ರವಾದಿ *ﷺ* ಜನ್ಮದಿನ ಪ್ರಯುಕ್ತ ಬಹರೈನ್ ಬ್ರದರ್ಸ್ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುವ ಮೌಲೂದ್ ಪಾರಾಯಣ ಕಾರ್ಯಕ್ರಮವು ಕಳೆದ ರಾತ್ರಿ ಬುದಯ್ಯದಲ್ಲಿರುವ ಫಾರಿಸ್ ಅವರ ರೂಮಿನಲ್ಲಿ ನಡೆಯಿತು.
ಹಾರಿಸ್ ಸಂಪ್ಯ ಅವರ ದುಆದೊಂದಿಗೆ ಪ್ರಾರಂಭವಾದ ಈ ಆತ್ಮೀಯ ಮೌಲೂದ್ ಮಜ್ಲಿಸ್ ನಲ್ಲಿ ಎಲ್ಲರೂ ಪ್ರವಾದಿ *ﷺ* ರವರ ಪ್ರಕೀರ್ತನೆ ಹಾಡಿ ತನ್ಮಯರಾದರು.
ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರವಾದಿ (ﷺ)ಪ್ರೇಮದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಹಾಗೂ ದೀನೀಪ್ರಜ್ಞೆಯುಳ್ಳವರಾಗಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು.
ನಂತರ ಅಶ್ರಫ್ ರೆಂಜಾಡಿ ನೇತೃತ್ವದಲ್ಲಿ "ಅಶ್ರಖ ಬೈತ್" ಹಾಡಲಾಯಿತು. ಖಲಂದರ್ ಉಸ್ತಾದ್ ಅವರ ಭಕ್ತಿನಿರ್ಭರ ದುಆದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಬಹರೈನ್ ಬ್ರದರ್ಸ್ ಗೆಳೆಯರು ಐಹಿಕ ಗೆಳೆತನವನ್ನು ಉಪಯೋಗಿಸಿ ಆಧ್ಯಾತ್ಮಿಕ ಕಾರ್ಯಕ್ರಮ ಸಂಘಟಿಸಿದ್ದು ಪ್ರಶಂಸನೀಯವಾಯಿತು. ಕೊನೆಗೆ ಊರಿನ ಸಾಂಪ್ರದಾಯಿಕ ತಬರ್ರುಕ್ "ಯರ್ಚಿ ಪತ್ರ್" ವಿತರಿಸಲಾಯಿತು.
ನಿನ್ನೆಯ ಕಾರ್ಯಕ್ರಮಕ್ಕೆ ಸುಸಜ್ಜಿತ ಸ್ಥಳಾವಕಾಶ ನೀಡಿದ ಫಾರಿಸ್ ಅವರಿಗೆ ಮತ್ತು ಉಪಹಾರವನ್ನು ಸಿದ್ಧಗೊಳಿಸಲು ಶ್ರಮಿಸಿದ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಹಾಗೂ ಆಗಮಿಸಿದ ಎಲ್ಲರಿಗೂ ಅಲ್ಲಾಹನು ಖೈರ್ ಬರಕತ್ ನೀಡಲಿ.
*آميــــــن يـا رب الــعالمــيــــــــن*
Bahrain Bro's- Manglurians
Contact information, map and directions, contact form, opening hours, services, ratings, photos, videos and announcements from Bahrain Bro's- Manglurians, Sports, Manama.
20/10/2019
05/05/2019
Ramadan Kareem ❤❤
BFL SEASON 1
BAHRAIN BROTHERS VS ANNAMALI FAN'S
28/04/2019
BAHRAIN BROTHERS ❤❤❤❤❤
27/04/2019
Best player of the tournament-
Nawfal renjadi
Best Goali- Mak jeelani
27/04/2019
*ಚೊಚ್ಚಲ "ಬಹರೈನ್ ಬ್ಯಾರೀಸ್ ಲೀಗ್" ಟ್ರೋಫಿ "ಬಹರೈನ್ ಬ್ರದರ್ಸ್" ತಂಡದ ಮಡಿಲಿಗೆ*
*ಮ್ಯಾಂಗ್ಲೂರ್ ಬಾಯ್ಸ್* ಆಯೋಜಿಸಿದ 7 ತಂಡಗಳನ್ನೊಳಗೊಂಡ *ಬಹರೈನ್ ಬ್ಯಾರೀಸ್ ಲೀಗ್ 2019 (ಸೀಸನ್-1)* ಫೈನಲ್ ಪಂದ್ಯಾಟದಲ್ಲಿ *ಬಹರೈನ್ ಬ್ರದರ್ಸ್* ತಂಡವು *ಅಣ್ಣಾಮಲೈ ಫ್ಯಾನ್ಸ್* ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಲೀಗ್ ಹಂತದ ಮೊದಲೆರಡು ಪಂದ್ಯಗಳಲ್ಲಿ ಗೋಲುರಹಿತವಾಗಿ ಡ್ರಾ ಗಳಿಸಿದ *ರವೂಫ್* ನೇತೃತ್ವದ *ಬಹರೈನ್ ಬ್ರದರ್ಸ್* ತಂಡವು ಅಂತಿಮ ಪಂದ್ಯದಲ್ಲಿ ಬಲಿಷ್ಠ *ಮ್ಯಾಂಗ್ಲೂರ್ ಬಾಯ್ಸ್* ತಂಡವನ್ನು ಮಣಿಸಿ 5 ಅಂಕಗಳೊಂದಿಗೆ ಎ ಬಣದ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತು.
ಪ್ಲೇ ಆಫ್ ನ ಪ್ರಥಮ ಪಂದ್ಯದಲ್ಲೇ *ಸಫ್ವಾನ್ ಷಾ* ನೇತೃತ್ವದ *ಅಣ್ಣಾಮಲೈ ಫ್ಯಾನ್ಸ್* ತಂಡವನ್ನು 2-0 ಅಂತರದಿಂದ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿತು.
ಪ್ರತಿಷ್ಠೆಯ ಕಣವಾದ ಫೈನಲ್ ಪಂದ್ಯದಲ್ಲಿ *ಬಹರೈನ್ ಬ್ರದರ್ಸ್* ತಂಡಕ್ಕೆ ಮತ್ತೊಮ್ಮೆ *ಅಣ್ಣಾಮಲೈ ಫ್ಯಾನ್ಸ್* ತಂಡವು ಎದುರಾಳಿಯಾಯಿತು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯಾಟದಲ್ಲಿ ಬದಲಿ ಆಟಗಾರನಾಗಿ ಇಳಿದ *ಶಾಫಿ* ಹಾಗೂ ಮುನ್ಪಡೆ ಆಟಗಾರ *ನೌಫಲ್* ರ ಸೊಗಸಾದ ಗೋಲುಗಳಿಂದ *ಬಹರೈನ್ ಬ್ರದರ್ಸ್* ವಿಜಯಶಾಲಿಯಾಯಿತು. ಎದುರಾಳಿ ತಂಡ ಕೇವಲ ಒಂದು ಗೋಲು ಗಳಿಸಲಷ್ಟೇ ಶಕ್ತವಾಗಿ 2-1 ಅಂತರದಿಂದ ಸೋಲನ್ನೊಪ್ಪಿಕೊಂಡಿತು.
ಟೀಮ್ ಮ್ಯಾನೇಜರ್ *ಮಾಝಿನ್* ಹಾಗೂ ಕೋಚ್ *ರಜಾಕ್ ಕಂಡಿಲ* ಗರಡಿಯಲ್ಲಿ ಪಳಗಿದ *ಬಹರೈನ್ ಬ್ರದರ್ಸ್* ತಂಡದ ಮುನ್ಪಡೆ ಆಟಗಾರರಾದ *ನೌಫಲ್, ರವೂಫ್* ಮತ್ತು *ಉಬೈದ್* ಹಾಗೂ ರಕ್ಷಣಾ ಆಟಗಾರರಾದ *ಅನ್ಸಾರ್, ಇರ್ಫಾನ್* ಮತ್ತು *ಶಾದಿನ್* ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ಬದಲಿ ಆಟಗಾರರಾದ *ಆಸೀಫ್, ಶಾಫಿ* ಮತ್ತು *ನವಾಜ್* ಉತ್ತಮ ಸಾತ್ ನೀಡಿದರು. ದುರಾದ್ರಷ್ಟವಶಾತ್ ಪಂದ್ಯಾಟದ ಮದ್ಯೆ ಉತ್ತಮವಾಗಿ ಗೋಲ್ ಕೀಪಿಂಗ್ ಮಾಡುತ್ತಿದ್ದ *ಖಲೀಲ್* ಗಾಯಗೊಂಡು ಹೊರ ನಡೆಯಬೇಕಾಗಿ ಬಂತು. ಅವರ ಬದಲಿಗೆ ಗೋಲ್ ಕೀಪರ್ ಆಗಿ ಬಂದ *ಜೀಲಾನಿ* ಪಂದ್ಯಾವಳಿಯ *ಉತ್ತಮ ಗೋಲ್ ಕೀಪರ್* ಪ್ರಶಸ್ತಿ ಜಯಿಸಿದರು. ಈ ಪ್ರಶಸ್ತಿಯನ್ನು ಅವರು ಗಾಯಾಳು *ಖಲೀಲ್* ಅವರಿಗೆ ಸಮರ್ಪಿಸಿದರು. ನೌಫಲ್ ಅವರು *ಪಂದ್ಯಾವಳಿಯ ಉತ್ತಮ ಆಟಗಾರ* ಪ್ರಶಸ್ತಿಯನ್ನು ಪಡೆದರು
ಹೀಗೆ ಬಹರೈನ್ ಬ್ರದರ್ಸ್ ತಂಡವು ಸಾಂಘಿಕ ಪ್ರಯತ್ನದಿಂದ ಚೊಚ್ಚಲ *ಬಹರೈನ್ ಬ್ಯಾರೀಸ್ ಲೀಗ್ ಚಾಂಪಿಯನ್* ಕಿರೀಟವನ್ನು ತನ್ನ ಮುಡಿಗೇರಿಸಿತು.
ಈ ಪಂದ್ಯಾಟವನ್ನು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಿರ್ವಹಿಸಿದ ಆಯೋಜಕರಾದ *ಮ್ಯಾಂಗ್ಲೂರ್ ಬಾಯ್ಸ್* ಎಲ್ಲರ ಪ್ರಶಂಸೆಗೆ ಪಾತ್ರವಾಯಿತು
16/03/2019
Congratulations for winners and runners of BBL Season 1 and .
And thanks for BBL orginser for making cricket festival for beary's community👏👏
Regards on behalf of
BAHRAIN BROTHERS😍
16/01/2019
Team MANGLORE WARRIORS
(Owner SAMAD UJIREBETTU)
16/01/2019
Team KERALA RAIDERS
(Owner ABOOBACKER PATLA)
16/01/2019
Team CHAKOOR RAIDERS
(Owner YAKOOB)
Click here to claim your Sponsored Listing.
Location
Category
Telephone
Website
Address
Manama